ಕಿಯೋನಿಕ್ಸ್ ಕೈಗೊಂಡ ಚಟುವಟಿಕೆಗಳಲ್ಲಿ ಮಾನವ ಸಂಪನ್ಮೂಲ ಸರಬರಾಜು ಹಾಗೊ ನಿರ್ವಹಣೆ ಪ್ರಮುಖವಾಗಿದ್ದು. ಐಟಿ ಮಾನವ ಸಂಪನ್ಮೂಲ ಒದಗಿಸುವ ಸೇವೆಯಲ್ಲಿ, ಡೇಟಾ ಎಂಟ್ರಿ ಅಪರೇಟರ್, ಪ್ರೋಗ್ರಾಮಿಂಗ್, ವೆಬ್ ಅಭಿವೃದ್ಧಿ, ಡೇಟಾಬೇಸ್ ಆಡಳಿತ, ಅಂತರಜಾಲ ನಿರ್ವಹಣಾ, ಇದಕ್ಕೆ ಪೊರಕವಾದ ತಾಂತ್ರಿಕ ಬೆಂಬಲ ಹಾಗೊ ಸಂಬಂಧಿತ ಸೇವೆಗಳ ಪರಿಣಿತಿಯನ್ನು ಹೊಂದಿರುತ್ತದೆ. ಕಿಯೋನಿಕ್ಸ್ ಮುಂಚಿತವಾಗಿ ತನ್ನ ಗ್ರಾಹಕರಿಗೆ ಬೇಕಾದ ಸೂಕ್ತ ಮಾನವ ಸಂಪನ್ಮೂಲ ಗುರುತಿಸಿ, ಕಠಿಣ ಆಯ್ಕಯ ವಿಧಾನವನ್ನು ಅನುಸರಿಸಿ ಹಾಗೊ ಈ ದೆಸೆಯಲಿ ಗ್ರಾಹಕರನ್ನು ಸಂಪೂರ್ಣವಾಗಿ ಸಜ್ಜುಗೊಳಿಸುವವರೆಗು ಸಹಯೋಗ ನೀಡುತ್ತಲಿದೆ.

ಈ ಸೇವೆ ಎಲ್ಲಾ ರಾಜ್ಯಾದ್ಯಂತ ಇದೆ. ಮೀಸಲಾದ ಮಾನವ ಸಂಪನ್ಮೂಲ ಅದರ ವ್ಯಾಪಕ ಪೂಲ್ ಸಂಪನ್ಮೂಲಗಳ ನಿಭಾಯಿಸಲು ಡೇಟಾಬೇಸ್ ಮೂಲಕ ತನ್ನ ಗ್ರಾಹಕರಿಗೆ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದೆ.ನಮ್ಮ ಗೌರವ ಗ್ರಾಹಕರ ಪುನರಾವರ್ತಿತ ಅವಶ್ಯಕತೆಗಳನ್ನು ನಮ್ಮ ಸೇವೆಯು ಸೂಚನೆಯಾಗಿರುತ್ತದೆ.

 ಹೈ ಲೈಟ್ಸ್:

ರಾಜ್ಯಾದ್ಯಂತ ೨೯೪ ಐಟಿ ಶಿಕ್ಷಣ ಹಾಗೂ ತರಬೇತಿ ಕೇಂದ್ರಗಳಿವೆ.

ಪ್ರತಿವರ್ಷ ೧೫,೦೦೦ಕ್ಕೂ ಹೆಚ್ಚಿನ ತಾಂತ್ರಿಕ ನುರಿತ ಮಾನವ ಸಂಪನ್ಮೂಲಗಳ ಲಭ್ಯವಿರುತ್ತದೆ.

ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಾದ ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ, ಇ ಆಡಳಿತ, ಮುನ್ಸಿಪಲ್ ಕಾರ್ಪೊರೇಷನ್, ಬಿಡಿಎ, ಎಂಎಸ್ಐಎಲ್ ಗಳಂತ 72 ವಿಭಾಗಗಳಲ್ಲಿ ಸುಮಾರು ೭೦೦೦ ಕ್ಕೂ ಹೆಚ್ಚಿನ ಮಾನವ ಸಂಪನ್ಮೂಲಗಳನ್ನು ಒದಗಿಸಲಾಗುತ್ತಿದೆ.