ನಮ್ಮ ಕನ್ಸಲ್ಟೆನ್ಸಿ ಸೇವೆಗಳು:

  1. ನೆಟ್ವರ್ಕಿಂಗ್,
  2. ಸಾಫ್ಟ್-ವೇರ್ ಅಭಿವೃದ್ಧಿ,
  3. ವೆಬ್ ಸಲ್ಯೂಶನ್ಸ್,

ನಾವು ಸಮಗ್ರ ಮಾಹಿತಿ ತಂತ್ರಜ್ಞಾನ ಮತ್ತು ಸ್ವಯಂಚಾಲಿತ ಕನ್ಸಲ್ಟೆನ್ಸಿ ಸೇವೆಗಳನ್ನು ಒದಗಿಸುತ್ತೇವೆ. ಕಿಯಾನಿಕ್ಸ್ , ಕರ್ನಾಟಕದಲ್ಲಿ ಹಲವು ಮುಖ್ಯ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದು, ಸುಮಾರು ೨೫ ವರ್ಷದ ಪರಿಣತಿ ಹೊಂದಿದೆ.

ನೆಟ್ವರ್ಕಿಂಗ್

ಉತ್ತಮ ತರೆಬೇತಿ ಹಾಗೂ ಅನುಭವ ಹೊಂದಿರುವ ಸಿಬ್ಬಂದಿಯು, ಕಂಪ್ಯೂಟರ್ ನೆಟ್ವರ್ಕಿಂಗ್ ಮತ್ತು ನೆಟ್ವರ್ಕ್ ನಿರ್ವಹಣೆಯ ಪರಿಹಾರಗಳನ್ನು ನೀಡುತ್ತಾರೆ. ಈ ಸೇವೆಗಳನ್ನು ಕರ್ನಾಟಕದಾದ್ಯಂತ ಕಿಯಾನಿಕ್ಸ್ ಮೂಲಕ ಅಥವಾ ವ್ಯವಹಾರ ಸಹವರ್ತಿಗಳ ಮೂಲಕ ಒದಗಿಸಲಾಗುತ್ತದೆ. ಪ್ರಸ್ತುತ, ನಾವು ರಾಜ್ಯ ಸರ್ಕಾರಕ್ಕೆ ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ಕಂಪ್ಯೂಟರ್ಗಳ ಮತ್ತು ಕಂಪ್ಯೂಟರ್ ಪೆರಿಫೆರಲ್ ಗಳ, ವಾರ್ಷಿಕ ನಿರ್ವಹಣಾ ಕಾರ್ಯವನ್ನು ಒದಗಿಸುತ್ತಿದ್ದೇವೆ.

ನಾವು cctv, ಕಣ್ಗಾವಲು ಉಪಕರಣಗಳ ಹಾಗೂ ಭದ್ರತಾ ವ್ಯವಸ್ಥೆಗಳ, ವಿನ್ಯಾಸ, ಅನುಸ್ಥಾಪನೆ ಹಾಗೂ ನಿರ್ವಹಣೆಯ ಸಾಮರ್ಥ್ಯವನ್ನು ಕೂಡ ಹೊಂದಿದ್ದೇವೆ.

ಸಾಫ್ಟ್ವೇರ್

ನಾವು ಸಾಫ್ಟ್ವೇರ್ ಆಪ್(Application)ಗಳನ್ನು ಅಭಿವೃದ್ಧಿಪಡಿಸುವ ಆಂತರಿಕ ಪರಿಣತಿ ಹಾಗೂ ಸಾಮರ್ಥ್ಯವನ್ನು ಹೊಂದಿದ್ದೇವೆ. ಕಿಯಾನಿಕ್ಸ್ ಹಲವಾರು ಸಾಫ್ಟ್ವೇರ್ ಆಪ್(Application)ಗಳನ್ನು ಅಭಿವೃದ್ಧಿಪಡಿಸಿದೆ.

ನಮ್ಮ ವೆಬ್ ಪರಿಹಾರ ವಿಭಾಗವು ಪ್ರತ್ಯೇಕವಾಗಿ ವೆಬ್-ಸೈಟ್ ಗಳ ಸೃಷ್ಟಿ, ಹೋಸ್ಟಿಂಗ್ ಮತ್ತು ನಿರ್ವಹಣೆಯ ಕಾರ್ಯಗಳನ್ನು ಮಾಡುತ್ತದೆ. ಕಿಯಾನಿಕ್ಸ್ ಹಲವು ಸರ್ಕಾರಿ ಇಲಾಖೆಗಳ ವೆಬ್-ಸೈಟ್ ಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ನಿರ್ವಹಿಸುತ್ತಿದೆ.

ಕಿಯಾನಿಕ್ಸ್ ದೊಡ್ಡ ಪ್ರಮಾಣದ 'ಡಾಟಾ ಎಂಟ್ರಿ' ಹಾಗೂ 'ಡಾಟಾ ವೇರ್-ಹೌಸಿಂಗ್' ಯೋಜನೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಅಭಿವೃದ್ಧಿ ಪಡಿಸಿದೆ. ಜನಗಣತಿ ಇಲಾಖೆ, ಸಣ್ಣ ಉಳಿತಾಯ ಮತ್ತು ರಾಜ್ಯ ಲಾಟರಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಕೇಂದ್ರ ಕಾರಾಗೃಹ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಂಗಳೂರು ನೀರು ಸರಬರಾಜು ಮತ್ತು ಕೊಳಚೆನೀರು ಮಂಡಳಿ ಮತ್ತು ಶಿಕ್ಷಣ ಇಲಾಖೆ ಮುಂತಾದ ಗ್ರಾಹಕರ ಯೋಜನೆಗಳನ್ನು ನಿರ್ವಹಿಸಲಾಗಿದೆ.

ಮುಖ್ಯ ಯೋಜನೆ- e-procurement ಪರಿಹಾರ

ಕರ್ನಾಟಕ ಸರ್ಕಾರದ ಇಲಾಖೆಗಳಿಗೆ, ಇ-ಆಡಳಿತ ಪರಿಹಾರಗಳನ್ನು ಒದಗಿಸುವ ಉದ್ದೇಶದಿಂದ, ಕಿಯಾನಿಕ್ಸ್ ಇ-ಟೆಂಡರ್ / ಇ-ಪ್ರೊಕ್ಯೂರ್ಮೆಂಟ್ ಸಾಫ್ಟ್-ವೇರ್, ಕಾರ್ಯ ನಿರ್ವಹಣಾ ಸಾಫ್ಟ್-ವೇರ್, ವೇತನ ಪಟ್ಟಿ ಸಾಫ್ಟ್-ವೇರ್ ಇತ್ಯಾದಿ ಸಾಫ್ಟ್-ವೇರ್ಗಳನ್ನು ಪರಿಚಯಿಸಿದೆ. ಈ ಸಾಫ್ಟ್-ವೇರ್ ಗಳನ್ನು, ವೆಬ್ ಆಧಾರಿತ ತಂತ್ರಜ್ಞಾನದ ಪರಿಹಾರಗಳನ್ನು ನೀಡುವಲ್ಲಿ ಪ್ರಮುಖ ಸಂಸ್ಥೆಯಾದ ಮೆ. ಆಂಟಾರಿಸ್ ಸಿಸ್ಟಮ್ಸ್ ಲಿಮಿಟೆಡ್ ನೊಂದಿಗೆ ತಾಂತ್ರಿಕ ಟೈ ಆಪ್ ಮಾಡಿಕೊಂಡು ಅಭಿವೃದ್ಧಿ ಪಡಿಸಲಾಗಿದೆ.

೨೦೦೨ ರಲ್ಲಿ, ರಾಜ್ಯದಲ್ಲಿ ಮೊಟ್ಟ ಮೊದಲ ಭಾರಿಗೆ ಈ ಯೋಜನೆಯನ್ನು ಕೃಷ್ಣ ಭಾಗ್ಯ ಜಲಾ ನಿಗಮ ಲಿಮಿಟೆಡ್ ನಲ್ಲಿ ಪರಿಚಯಿಸಲಾಯಿತು. ಈಗ 25 ಕ್ಕೂ ಹೆಚ್ಚು ಸರ್ಕಾರಿ ಇಲಾಖೆಗಳು / ಸಂಸ್ಥೆಗಳು ಈ ಪರಿಹಾರವನ್ನು ಬಳಸುತ್ತಿವೆ. ಅಂತರ್ಜಾಲ ಆಧಾರಿತ "TENDERWIZARD" ಆಪ್ ಅನ್ನು, ವೆಬ್ ಸಶಕ್ತ ಟೆಂಡರ್ ವ್ಯವಸ್ಥೆಗಳಿಗೆ ಅಭಿವೃದ್ಧಿ ಪಡಿಸಲಾಗಿದೆ, ಈ ಆಪ್ ಸರಕುಗಳನ್ನು ಗಳಿಸುವಲ್ಲಿ ಸ್ವಯಂಚಾಲನೆ ಹಾಗೂ ಪಾರದರ್ಶಕತೆಯನ್ನು ತರುತ್ತದೆ.