ಕಿಯೋನಿಕ್ಸ್, ಏಷಿಯಾದಲ್ಲಿ ಮೊದಲ ಎಲೆಕ್ಟ್ರಾನಿಕ್ ಸಿಟಿ ಸ್ಥಾಪಿಸಿದ ಸಂಸ್ಥೆಯಾಗಿದೆ. ಬೆಂಗಳೂರು ನಗರವನ್ನು 'ಭಾರತದ ಸಿಲಿಕಾನ್ ವ್ಯಾಲಿ'ಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಿಯೋನಿಕ್ಸ್ ಎಲೆಕ್ಟ್ರಾನಿಕ್ ಸಿಟಿ ವಿಶ್ವದರ್ಜೆಯ ಮೂಲಸೌಕರ್ಯವನ್ನು ಹೊಂದಿದ್ದು Infosys, Hewlett & Packard, Wipro , Tata Electronics Development Services and Siemens ಗಳಂತಹ ಪ್ರಮುಖ IT/ITES ಸಂಸ್ಥೆಗಳನ್ನು ಹೊಂದಿದೆ. ಕಿಯೋನಿಕ್ಸ್ ಎಲೆಕ್ಟ್ರಾನಿಕ್ ಸಿಟಿಯು ಇಂದು ವಿಶ್ವದ ಹೆಗ್ಗುರುತಾಗಿದೆ.

ಕಿಯೋನಿಕ್ಸ್, ೩.೨ ಎಕರೆ ಪ್ರದೇಶದಲ್ಲಿ IT ಪಾರ್ಕ್ ಹುಬ್ಬಳ್ಳಿ ಸ್ಥಾಪಿಸಿದ್ದು , ೨,೭೫,೦೦೦ ಚದುರ ಅಡಿ ಜಾಗದಲ್ಲಿ ವಿಶ್ವ ದರ್ಜೆಯ ಸೌಲಭ್ಯವನ್ನು ಒದಗಿಸಿದ್ದು IT ಕಾರ್ಯಕ್ಷೇತ್ರದಲ್ಲಿರುವ ಕಂಪನಿಗಳು,ಕಳೆದ ಹತ್ತು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ.ಕರ್ನಾಟಕದ  ೨/೩ ದರ್ಜೆ ನಗರಗಳಾದ ಶಿವಮೊಗ್ಗ ಹಾಗೊ ಕಲ್ಬುರ್ಗಿ ನಗರಗಳಲಿ IT ಪಾರ್ಕ್ ಗಳನ್ನು ಸ್ಥಾಪಿಸಲಾಗಿದೆ.೭೩,೬೬೬  ಚದುರ ಅಡಿ ಕಟ್ಟಡದಲ್ಲಿ ನಿರ್ಮಿಸಲಾಗಿರುವ, ಶಿವಮೊಗ್ಗ IT ಪಾರ್ಕ್ ಯೋಜನೆಯ ಮೊದಲನೇ ಹಂತ ಏಪ್ರಿಲ್ ೨೦೧೩ ರಿಂದ ಪ್ರಾರಂಭವಾಗಿದೆ ಮತ್ತು ೫೩,೦೦೦ ಸಾವಿರ ಚದುರ ಅಡಿ ಕಟ್ಟಡದಲ್ಲಿ ಗುಲ್ಬರ್ಗ IT ಪಾರ್ಕ್ ಯೋಜನೆಯು ಸಂಪೂರ್ಣಗೊಂಡಿದ್ದು, ಜನವರಿ ೨೦೧೩ ರಿಂದ ಪ್ರಾರಂಭವಾಗಿದೆ. ಶಿವಮೊಗ್ಗದಲ್ಲಿ ೩೩ ಎಕರೆ ಪ್ರದೇಶದಲ್ಲಿ, IT/ITES-SEZ ಅನ್ನು ಸ್ಥಾಪಿಸಲಾಗಿದೆ. ಕಿಯೋನಿಕ್ಸ್ , ಮಂಗಳೂರು ಹಾಗು ಮೈಸೂರಿನಲ್ಲಿ ಮೀಸಲಿಡಲಾದ IT ಪಾರ್ಕ್ ಪ್ರದೇಶದಲ್ಲಿ ಸಮ್ಮಿಶ್ರ ಭೂ ಅಭಿವೃದ್ದಿಯೊಂದಿಗೆ 'ಬೂಟ್ ಮಾಡೆಲ್' ಮಾದರಿಯಲ್ಲಿ ಕಾರ್ಯಗತಗೊಳಿಸಲು ಸಮರ್ಥವಾದ ಪಾಲುದಾರರಿಗಾಗಿ ಹುಡುಕುತ್ತಿದೆ.