ಕಿಯೋನಿಕ್ಸ್ ನ ITES ವಿಭಾಗವು, ಹೋಬಳಿ , ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರ ಸ್ಥಳಗಳಲ್ಲಿ ೨೮೯ ತರಬೇತಿ ಕೇಂದ್ರಗಳನ್ನು ಕರ್ನಾಟಕದಾದ್ಯಂತ ಹೊಂದಿರುತ್ತದೆ. ಕಿಯಯೋನಿಕ್ಸ್ ಮಾಹಿತಿ ತಂತ್ರಜ್ಞಾನ ತರಬೇತಿಯನ್ನು ತನ್ನ ಸ್ವಂತ ಕೇಂದ್ರಗಳಿಂದ, yuva.com ಕೇಂದ್ರಗಳಿಂದ ಮತ್ತು ಫ್ರ್ಯಾಂಚೈಸ್ ಕೇಂದ್ರಗಳಿಂದ ನೀಡುತ್ತಿದೆ. ಈ ಕೇಂದ್ರಗಳು ಪ್ರತಿಯೊಂದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ, ಮಾಹಿತಿ ತಂತ್ರಜ್ಞಾನ ಸಮುದಾಯವನ್ನು ಶಕ್ತಿಯುತಗೊಳಿಸಲು, ಮಾಹಿತಿ ತಂತ್ರಜ್ಞಾನ ಚಟುವಟಿಕೆಗಳ ಕೇಂದ್ರವಾಗಿ ಕೆಲಸ ನಿರ್ವಹಿಸುತ್ತಿವೆ. ಕಿಯಾನಿಕ್ಸ್ ಮಾಹಿತಿ ತಂತ್ರಜ್ಞಾನ ತರಬೇತಿ ಮತ್ತು ITES ವಿಭಾಗವು ISO-9001:2015 ಪ್ರಮಾಣಪತ್ರವನ್ನು ಹೊಂದಿರುತ್ತದೆ.

ಕಿಯೋನಿಕ್ಸ್ ಸಂಸ್ಥೆಯು ಮಾರುಕಟ್ಟೆಯ ಹಾಗೂ ವ್ಯಾಪಾರಿ ಸಂಸ್ಥೆಗಳ ಬೇಡಿಕೆಯಂತೆ ಗಣಕ ತರಬೇತಿಯನ್ನು ವಿದ್ಯಾರ್ಥಿ ಸಮುದಾಯಕ್ಕೆ ಒದಗಿಸುತ್ತಿದೆ. ಸರಕಾರಿ ಇಲಾಖೆ, ಸಂಘ ಸಂಸ್ಥೆಗಳ ನೌಕರರಿಗೂ ಗಣಕ ತರಬೇತಿಯನ್ನು ನೀಡುತ್ತಿದೆ. ಈ ತರಬೇತಿ ಕೇಂದ್ರಗಳು ಅಂತರ್ಜಾಲ ಸೌಲಭ್ಯ ಹಾಗೂ ನವೀನ ಮೂಲಭೂತ ಸಲಕರಣೆಗಳನ್ನು ಹೊಂದಿರುತ್ತವೆ. ಕಿಯೋನಿಕ್ಸ್, ಕರ್ನಾಟಕ ರಾಜ್ಯದ ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಮಾಹಿತಿ ತಂತ್ರಜ್ಞಾನ ವಿಧ್ಯಾಭ್ಯಾಸವನ್ನು ಒದಗಿಸುವ ಒಂದು ದೊಡ್ಡ ಸಂಸ್ಥೆಯಾಗಿದೆ. ಕಿಯೋನಿಕ್ಸ್ ವಿವಿಧ ಬಗೆಯ ಮಾಹಿತಿ ತಂತ್ರಜ್ಞಾನ ಸಂಬಂಧಿತ ತರಬೇತಿ ಕಾರ್ಯಕ್ರಮಗಳನ್ನು ಶಿಕ್ಷಣ ವಂಚಿತ ಅಭ್ಯರ್ಥಿಗಳಿಗೆ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಪ್ರಾಯೋಜತ್ವದ ಸಹಯೋಗದೊಂದಿಗೆ ನೀಡುತ್ತಲಿದೆ.


ಕಿಯೋನಿಕ್ಸ್ ಸಂಸ್ಥೆಯು ೮ ಈಶಾನ್ಯ ರಾಜ್ಯಗಳು , ಗೋವ ರಾಜ್ಯದಲ್ಲಿ, DoNER ಮತ್ತು ICT ಇಲಾಖೆ ಭಾರತ ಸರ್ಕಾರದ ಪ್ರಾಯೋಜತ್ವದ ಮೇರೆಗೆ ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುತ್ತದೆ. ಅಲ್ಲದೆ ಕರ್ನಾಟಕ ರಾಜ್ಯದ ಮೊದಲ ಶ್ರೇಣಿಯ ಕರ್ನಾಟಕ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಗಣಕೀಕರಣ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸಿರುತ್ತದೆ..


ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಚಟುವಟಿಕೆಗಳ ಬೆಳವಣಿಗೆ ಹಾಗೂ ತರಬೇತಿ ಚಟುವಟಿಕೆಗಳನ್ನು ಈ ಕೆಳಗೆ ನೀಡಲಾಗಿದೆ :-

ಕಿಯಾನಿಕ್ಸ್ ಕಾಲ ಕಾಲಕ್ಕೆ ಮಾರುಕಟ್ಟೆಯ ಸನ್ನಿವೇಶಗಳಿಗೆ ಅನುಗುಣವಾಗಿ ಕೋರ್ಸ್ ಗಳನ್ನು ರಚಿಸಿದೆ. ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿತ, ನವೀನತೆಯಿಂದ ಕೂಡಿದ ಕೋರ್ಸ್ ಗಳನ್ನು ಕಡಿಮೆ ಶುಲ್ಕದೊಂದಿಗೆ ಭೋದನೆ ಮಾಡುತ್ತಿದೆ.