೧೯೭೬-೧೯೮೦
 • ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮವು ೧೯೭೬ರಲ್ಲಿ ವಿದ್ಯುನ್ಮಾನ ಉದ್ಯಮಕ್ಕೆ ಕರ್ನಾಟಕದಲ್ಲಿ ಒತ್ತಾಸೆ ಕೊಡುವ ಉದ್ದೇಶದಿಂದ ಹುಟ್ಟಿಕೊಂಡಿತು.
 • ವಿದ್ಯುನ್ಮಾನ ಉದ್ಯಮಗಳ ಉತ್ಪನ್ನಗಳನ್ನು ಪ್ರವರ್ಥಮಾನಕ್ಕೆ ತರಲು ELCOMEX ನಂತಹ ಪ್ರದರ್ಶನಗಳನ್ನು ನಡೆಸಲಾಯಿತು.
 •  ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ, ವಿದ್ಯುನ್ಮಾನ ಕೈಗಾರಿಕಾ ಮಳಿಗೆಗಳನ್ನು ನಿರ್ಮಿಸಲು ಯೋಜನೆಯನ್ನು ಹಾಕಿಕೊಳ್ಳಲಾಯಿತು.
 •  ಬೆಂಗಳೂರಿನ ನಗರ ಸರ ಹದ್ದಿನಿಂದ ೧೮ ಕಿ.ಮಿ ದೂರದಲ್ಲಿರುವ ಹೊಸೂರು ರಸ್ತೆಯ ಮೇಲೆ ೩೩೨ ಎಕರೆ ಜಾಗವನ್ನು ವಶಪಡಿಸಿಕೊಳ್ಳಲಾಯಿತು.
೧೯೮೧-೧೯೮೫
 • ಭಾರತದ ಮೊದಲ ಮಾಹಿತಿ ತಂತ್ರಜ್ಞಾನ ಪಾರ್ಕನ್ನು ಎಲೆಕ್ಟ್ರಾನಿಕ್ ಸಿಟಿಯಲ್ಲಿ ಪ್ರಾರಂಭಿಸಲಾಯಿತು.
 • ಎಲೆಕ್ಟ್ರಾನಿಕ್ ಸಿಟಿಯು, HP, Siemens, Wipro, Infosys, ITI, Motorola, TATA, NTTF ಗಳಂತಹ ವಿಶ್ವ ದರ್ಜೆಯ ಕಂಪೆನಿಗಳನ್ನು ಆಕರ್ಶಿಸಿದೆ.
 • ಪೀಣ್ಯದ ಕೈಗಾರಿಕಾ ಪ್ರದೇಶದಲ್ಲಿ TV ಉತ್ಪಾದನಾ ಘಟಕವನ್ನು ಸ್ಥಾಪಿಸಲಾಯಿತು.
೧೯೮೬-೧೯೯೦
 • ಮಾರ್ಕೋನಿ ಕಮ್ಯುನಿಕೇಷನ್ ಸಹಯೋಗದೊಂದಿಗೆ ತಂತಿರಹಿತ ಸಂಪರ್ಕ ಸಲಕರಣೆಗಳ ಉತ್ಪಾದನ ಘಟಕವನ್ನು ಸ್ಥಾಪಿಸಲಾಯಿತು..
 • ಯೋಕೊಗೊವ, ಬ್ಲೂ ಸ್ಟಾರ್, ಕ್ರೋನ್ ಕಮ್ಯುನಿಕೇಷನ್ ಕಂಪನಿಗಳೊಡನೆ ಸಹಬಾಗಿತ್ವದೊಂದಿಗೆ ಉತ್ಪಾದನಾ ಘಟಕಗಳನ್ನು ಪ್ರಾರಂಭಿಸಲಾಯಿತು.
೧೯೯೧-೧೯೯೫
 • ದೂರವಾಣಿ ದೊಡ್ಡ ಹಾಗೂ ಸಣ್ಣ ಉಪಕರಣಗಳು, ಯು. ಪಿ. ಎಸ್ ಯಂತ್ರಗಳು, ಫ್ಯಾಕ್ಸ್ ಯಂತ್ರಗಳ ಮಾರುಕಟ್ಟೆಯ ಘಟಕವನ್ನು ಪ್ರಾರಂಭಿಸಲಾಯಿತು.
 • ಗ್ರಾಹಕ ವಿದ್ಯುನ್ಮಾನ ಉಪಕರಣಗಳ ದುರಸ್ತಿ ಹಾಗೂ ಸೇವೆಗಳನ್ನು ಒದಗಿಸುವ ಔದ್ಯೋಗಿಕ ತರಬೇತಿಗಳನ್ನು ಪ್ರಾರಂಬಿಸಲಾಯಿತು.
೧೯೯೬-೨೦೦೦
 • ಭಾರತ ಸರ್ಕಾರದಿಂದ ಪುರಸ್ಕರಿಸಲ್ಪಟ್ಟ ಗಣಕಯಂತ್ರ ತರಬೇತಿ ಮತ್ತು ಶಿಕ್ಷಣ ಪ್ರಾಯೋಜಿತ ತರಬೇತಿ ಚಟುವಟಿಕೆಗಳನ್ನು ಪ್ರಾರಂಭಿಸಲಾಯಿತು.
 • ವೈದ್ಯಕೀಯ ವಿದ್ಯುನ್ಮಾನ ಉಪಕರಣಗಳ, ಸಂಚಾರ ಸಾಧನಗಳ, ತಂತಿ ರಹಿತ ಸಂಪರ್ಕ ಸಾಧನಗಳ, ಗಣಕಯಂತ್ರ ಮತ್ತು ಸಾಫ್ಟ್-ವೇರ್ ಗಾಗಿ ಪ್ರಮುಖ ತಯಾರಕರೊಂದಿಗೆ ಮಾರುಕಟ್ಟೆ ಸೌಲಭ್ಯ ಒದಗಿಸಲು ನಿವೇದನಾ ಪತ್ರ ಒಪ್ಪಂದ (MOU) ಮಾಡಿಕೊಳ್ಳಲಾಯಿತು.
 • ಮೈಸೂರಿನಲ್ಲಿ ಸಾಫ್ಟ್ವೇರ್ ತಂತ್ರಜ್ಞಾನ ಪಾರ್ಕನ್ನು ಪ್ರಾರಂಭಿಸಲಾಯಿತು.
 • ಹುಬ್ಬಳ್ಳಿಯಲ್ಲಿ ಸಾಫ್ಟ್ವೇರ್ ಪಾರ್ಕನ್ನು ಸ್ಥಾಪಿಸಲು, ಮಹಾನಗರ ಪಾಲಿಕೆಯ ವ್ಯಾಪಾರ ಮಳಿಗೆ ಕಟ್ಟಡವನ್ನು ಸುಪರ್ದಿಗೆ ತೆಗೆದುಕೊಳ್ಳಲಾಯಿತು.
 • ಕರ್ನಾಟಕ ರಾಜ್ಯದಲ್ಲಿ ಮಾಹಿತಿ ತಂತ್ರಜ್ಞಾನ ಇಲಾಖೆ ರಚನೆಯಾದಾಗಿನಿಂದ, ಕಿಯಾನಿಕ್ಸ್ ಅದರ ಒಂದು ಭಾಗವಾಗಿದೆ.
 • ಕರ್ನಾಟಕ ಸರ್ಕಾರದ yuva.com ಗಣಕಯಂತ್ರ ತರಬೇತಿ ಯೋಜನೆಯ ಸಹಭಾಗಿತ್ವದೊಂದಿಗೆ 176 yuva.com ಕೇಂದ್ರಗಳನ್ನು ಕರ್ನಾಟಕದಾದ್ಯಂತ ಪ್ರಾರಂಭಿಸಲಾಯಿತು.

 

೨೦೦೧-೨೦೦೬
 • ಕರ್ನಾಟಕ ರಾಜ್ಯಾದ್ಯಂತ ಗಣಕಯಂತ್ರ ತರಬೇತಿ ಚಟುವಟಿಕೆಗಳನ್ನು ಸುಮಾರು 300 ಕೇಂದ್ರಗಳಲ್ಲಿ ವಿಸ್ತರಿಸಲಾಯಿತು.
 • ಮೈಸೂರಿನಲ್ಲಿ incubation ಕೇಂದ್ರ ಪ್ರಾರಂಭಿಸಲು 5 ಎಕರೆ ಭೂಮಿಯನ್ನು ಖರೀದಿ ಮಾಡಲಾಯಿತು.
 • ಪ್ರಪ್ರಥಮ ಬಾರಿಗೆ ಇ-ಟೆಂಡೆರ್ ಚಟುವಟಿಕೆಗಳನ್ನು ರಾಜ್ಯದಲ್ಲಿ ಪರಿಚಯಿಸಿ ಇತರೆ 15 ರಾಜ್ಯಗಳಿಗೆ ವಿಸ್ತರಿಸಲಾಯಿತು.
 • ಹಾರ್ಡ್ವೇರ್, ನೆಟ್ವರ್ಕಿಂಗ್, ವೆಬ್-ಸೈಟ್ , ನಿರ್ವಹಣೆಯನ್ನು ಮಾಡಲು ಆಂತರಿಕ, ದಕ್ಷ ತಂತ್ರಜ್ಞಾನವುಳ್ಳ ಪ್ರಬಲ ತಂಡವನ್ನು ರಚಿಸಲಾಯಿತು.
೨೦೦೭-೨೦೧೦
 • ಅರುಣಾಚಲ ಪ್ರದೇಶ ರಾಜ್ಯ ಸರ್ಕಾರದ, ಮಾಹಿತಿ ತಂತ್ರಜ್ಞಾನ ಮತ್ತು ವಿಜ್ಞಾನ ಇಲಾಖೆಯೊಂದಿಗೆ ರಾಜ್ಯದಲ್ಲಿ ಇ-ಆಡಳಿತ ಚಟುವಟಿಕೆಗಳನ್ನು ಕಾರ್ಯಗತಗೊಳಿಸುವ ಒಪ್ಪಂದವನ್ನು ಮಾಡಿಕೊಳ್ಳಲಾಯಿತು.
 • ಅರುಣಾಚಲ ಪ್ರದೇಶ ರಾಜ್ಯದ ರಾಜಧಾನಿಯಾದ ಇಟಾನಗರದಲ್ಲಿ IT Excellence ಕೇಂದ್ರವನ್ನು ಪ್ರಾರಂಭಿಸಲಾಯಿತು.
 • ಕರ್ನಾಟಕ ರಾಜ್ಯದ ಎರಡನೇ ಶ್ರೇಣಿಯ ನಗರಗಳಾದ ಹುಬ್ಬಳ್ಳಿ, ಗುಲ್ಬರ್ಗ,ಬೆಳಗಾವಿ, ಮೈಸೂರು, ಶಿವಮೊಗ್ಗ ಮತ್ತು ಮಂಗಳೂರಿನಲ್ಲಿ IT ಪಾರ್ಕ್-ಗಳನ್ನು ಸ್ಥಾಪಿಸಲು, ಕಿಯಾನಿಕ್ಸ್ ಸಕ್ರೀಯವಾಗಿ ಭಾಗವಹಿಸಿತು.
 • ಕಿಯೋನಿಕ್ಸ್, ಬಿಹಾರ ರಾಜ್ಯದಲ್ಲಿ, ಇ-ಸಂಗ್ರಹಣೆಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ಕೈಗೆತ್ತಿಕೊಂಡಿತು.
 • ಕಿಯೋನಿಕ್ಸ್ , ಪ್ರಪ್ರಥಮ ಭಾರಿಗೆ ಸ್ವಯಂಚಾಲಿತ ಪರೀಕ್ಷಾ ಪಥವನ್ನು, ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಗೆ ನಿರ್ಮಿಸಿತು.
 • ಕರ್ನಾಟಕ ರಾಜ್ಯಾದ್ಯಂತ ಇರುವ ಮಾಲಿನ್ಯ ಹೊರಸೂಸುವ ತಪಾಸಣಾ ಕೇಂದ್ರಗಳ ನೆಟ್ವರ್ಕಿಂಗ್ ಕೆಲಸವನ್ನು ಪೂರ್ಣಗೊಳಿಸಲಾಯಿತು.
 • ಕಿಯೋನಿಕ್ಸ್, BSNL, Intel, Suvidha ಹಾಗೂ ಇ-ಆಡಳಿತ ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕ ಕರೆ ಕೇಂದ್ರಗಳನ್ನು (epco) ಸ್ಥಾಪಿಸಲಾಯಿತು.
 • 10,000 ಎಕರೆ ಸ್ಥಳದಲ್ಲಿ ಮಾಹಿತಿ ತಂತ್ರಜ್ಞಾನ ಹೂಡಿಕೆ ಪ್ರದೇಶ (ITIR) ಸ್ಥಾಪಿಸಲು ITBT ಇಲಾಖೆಯು, ಕಿಯೋನಿಕ್ಸ್ ಸಂಸ್ಥೆಯನ್ನು Nodel ಎಜೆನ್ಸಿಯಾಗಿ ನೇಮಿಸಲಾಯಿತು.