ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್), ಐ ಎಸ್ ಒ 9001:2008 ಪ್ರಮಾಣಿತ ಸಂಸ್ಥೆ. ಕಿಯೋನಿಕ್ಸ್ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ವಿದ್ಯುನ್ಮಾನ ಉದ್ಯಮಗಳನ್ನು ಉತ್ತೇಜಿಸಲು ಹಾಗೂ ಈ ಉದ್ಯಮಗಳನ್ನು ಎಲ್ಲಾ  ಕಾಲದಲ್ಲೂ ಮುಂಚಣಿಯಲ್ಲಿಟ್ಟು ಜನಸಾಮಾನ್ಯರಿಗೆ ಮಾಹಿತಿ ತಂತ್ರಜ್ಞಾನ ಶಿಕ್ಷಣ ಹರಡುವ, ರಾಜ್ಯದ ಇ-ಅಡಳಿತ ಸೇವೆಗಳನ್ನು ಒದಗಿಸುವ ಮೂಲ ಉದ್ದೇಶವನಿಟ್ಟು ಕೊಂಡು 1976ರಲ್ಲಿ ಅಸ್ತಿತ್ವಕ್ಕೆ ಬಂದಿತು.

ಕಿಯೋನಿಕ್ಸ್ ರಾಜ್ಯದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೈಗಾರಿಕೆಗಳಿಗೆ ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಬದ್ದವಾಗಿರುತ್ತದೆ . ಎಸ್ ಟಿ ಪಿ ಐ ಸಂಸ್ಥೆಯ ಸಹಯೋಗದೊಂದಿಗೆ ಮಾಹಿತಿ ತಂತ್ರಜ್ಞಾನ ಉದ್ಯಮಗಳಿಗೆ ಇಂಟರ್ನೆಟ್ ಸಂಪರ್ಕ ಕಲ್ಪಿಸುವುದು ಹಾಗೂ ರಫ್ತು ಆಧಾರಿತ ಯೋಜನೆಗಳನ್ನು ಉತ್ತೇಜಿಸಲು ಸಹಕಾರ ನೀಡುತ್ತಿದೆ.

ನಿಗಮವು ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ ,ಬಿಹಾರ್ ಸರ್ಕಾರ, ಅರುಣಾಚಲ ಪ್ರದೇಶ ಸರ್ಕಾರ ಮತ್ತು ಬೇರೆ ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಮಾಹಿತಿ ತಂತ್ರಜ್ಞಾನ ತಂತ್ರಾಶ, ಇ-ಆಡಳಿತ ಯೋಜನೆ ಆನುಷ್ಠಾನ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸುತ್ತಿದೆ. ಕಂಪ್ಯೂಟರ್ ಹಾರ್ಡವೇರ್, ಸಾಪ್ಟವೇರ್, ವಿದ್ಯುನ್ಮಾನ ಮತ್ತು ಸೋಲಾರ್ ಉಪಕರಣಗಳನ್ನು ಸರ್ಕಾರದ ವಿವಿಧ ಇಲಾಖೆಗಳಿಗೆ ಸರಬರಾಜು ಮಾಡುತ್ತಿದೆ. ಅದೇ ರೀತಿ ಸರ್ಕಾರಿ ಸಂಸ್ಥೆಗಳಿಗೆ ಇ - ಟೆಂಡೆರ್ ವ್ಯವಸ್ಥೆಗಾಗಿ ಟೆಂಡೆರ್ ವಿಜಾರ್ಡ ಎಂಬ ವ್ಯವಸ್ಥೆಯನ್ನು ಒದಗಿಸಿಕೊಟ್ಟಿದೆ.

ಕಿಯೋನಿಕ್ಸ್ ಸಂಸ್ಥೆಯಲ್ಲಿ ನುರಿತ ಅನುಭವಿ ತಜ್ಞರ ಪ್ರಬಲ ತಂಡವಿದ್ದು, ನೆಟ್ ವರ್ಕಿಂಗ್ ಮತ್ತು ಮಾಹಿತಿ ತಂತ್ರಜ್ಞಾನ ಸೇವೆಗಳಲ್ಲಿ ನೈಪುಣ್ಯತೆಹೊಂದಿರುವ ವೃತ್ತಿಪರ ತಂಡವು ಇರುತ್ತದೆ. ಇದರ ಜೊತೆಗೆ ದೂರ ದೃಷ್ಠಿ ಯೋಜನೆಗಳಿಗಾಗಿ ಹಾಗೂ ಕಿಯೋನಿಕ್ಸ್ ಜನಪ್ರಿಯತೆಯನ್ನು ಇನ್ನಷ್ಟು ಬೆಳೆಸಲು ತಜ್ಞಾಸಲಹೆಗಾರರ /ಡೊಮೇನ್ ಅನುಭವಿ ತಜ್ಞರ ಸೇವೆಯನ್ನು ಪಡೆಯುತ್ತಿದ್ದು, ಸುಧಾರಣೆ ಹಾಗೂ ಪುನರ್ ರಚನೆ ಕಾರ್ಯಗಳನ್ನು ಬದಲಾಗುತ್ತಿರುವ ತಂತ್ರಜ್ಞಾನ ಗತಿಯನ್ನು ಉಳಿಸಿಕೊಳ್ಳಲು ಗ್ರಾಹಕರಿಗೆ ಮಾಹಿತಿ ತಂತ್ರಜ್ಞಾನ ಸೇವೆಯನ್ನು ಒದಗಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.