ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಬಗ್ಗೆ

ಕಿಯೋನಿಕ್ಸ್ ಸಂಸ್ಥೆಯು ಇ-ಆಡಳಿತ ಕೇಂದ್ರದ ಸಹಯೋಗದೊಂದಿಗೆ ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ಸರ್ಕಾರದ ನೌಕರರು/ ಸಿಬ್ಬಂದಿಗಳಿಗೆ ನಡೆಸಲು ಯೋಜಿಸಿದೆ. ಸರ್ಕಾರದ ಆದೇಶ ಸಂಖ್ಯೆ:ಡಿಪಿಎಆರ್ 104 ಇ-ಆಡಳಿತ 2014, ದಿನಾಂಕ 2 ನೇ ಡಿಸೆಂಬರ್ 2014 ರ ಪ್ರಕಾರ, ಎಲ್ಲಾ ಸರ್ಕಾರಿ ಉದ್ಯೋಗಿಗಳೂ ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು (ಎಂದರೆ ಸರ್ಕಾರಿ ಆದೇಶ ಸಂ ಡಿಪಿಎಆರ್ 43 ಎಸ್ ಸಿ ಆರ್ 2008 ಬೆಂಗಳೂರು ದಿನಾಂಕ 07.03.2012 ) ತೆಗೆದುಕೊಳ್ಳುವ ಅಗತ್ಯವಿದ್ದು. ಪ್ರಥಮ ಪ್ರಯತ್ನಕ್ಕೆ ಉದ್ಯೋಗಿಗಳು ಪರೀಕ್ಷಾ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದರೆ, ಆನ್ ಲೈನ್ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯ ಮೊದಲ ಯತ್ನದಲ್ಲಿ ಉತ್ತೀರ್ಣರಾಗಲು ಉದ್ಯೋಗಿಯು ವಿಫಲವಾದಲ್ಲಿ, ನಂತರದ ಪ್ರಯತ್ನದಲ್ಲಿ ಪರೀಕ್ಷೆಯನ್ನು ತೆಗೆದುಕೊಳ್ಳುವ ಯಾವುದೇ ಉದ್ಯೋಗಿಯು ಪರೀಕ್ಷಾ ಶುಲ್ಕವಾಗಿ 310 + ಬ್ಯಾಂಕಿಂಗ್ ಚಾರ್ಜಸ್ ಅನ್ನು ಪಾವತಿಸ ಬೇಕಾಗುತ್ತದೆ.

Link: https://clt.karnataka.gov.in